2024ರ ನವೆಂಬರ್ 1ರಂದು ಶ್ರಿ ಸ್ವಾಮಿನಾರಾಯಣ ಗುರುಕುಲ ಅಂತಾರಾಷ್ಟ್ರೀಯ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಎಲ್ಲ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕನ್ನಡ ಧ್ವಜವನ್ನು ಹಾರಿಸಿದರು ಮತ್ತು “ಜಯ ಭಾರತ ಜನನಿಯ ತನುಜಾತೆ” ಎಂಬ ನಾಡಗೀತೆಯನ್ನು ಹಾಡಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀಹರ್ಷ ಜೋಶಿ ಅವರು ಕನ್ನಡ ಭಾಷೆಯ ಮಹತ್ವದ ಕುರಿತು ಮಾತನಾಡಿ, ನಮ್ಮ ಭಾಷೆಯ ಸಮೃದ್ಧ ಪರಂಪರೆ ಮತ್ತು ಸಂಸ್ಕೃತಿಯ ಮಹತ್ವವನ್ನು ಹೇಳಿದರು. ಕನ್ನಡವನ್ನು ಹೆಚ್ಚು ಜನರು ಬಳಸಬೇಕೆಂದು ಪ್ರೋತ್ಸಾಹಿಸಿದರು ಹಾಗೂ ಕನ್ನಡಿಗರಲ್ಲದವರು ಕನ್ನಡವನ್ನು ಕಲಿಯಬೇಕು ಮತ್ತು ಕನ್ನಡದಲ್ಲಿ ಮಾತನಾಡಲು ಪ್ರೋತ್ಸಾಹಿಸಿದರು. ಈ ಕಾರ್ಯಕ್ರಮವು ಕನ್ನಡ ಪ್ರೀತಿ ಮತ್ತು ಸಂಸ್ಕೃತಿಯ ಮೆರುಗನ್ನು ತೋರಿಸಲು ಉತ್ತಮ ವೇದಿಕೆಯಾಗಿತ್ತು.
On November 1, 2024, Shree Swaminarayan Gurukul International School celebrated Kannada Rajyotsava with grandeur. All staff members participated in the event, hoisting the Kannada flag and singing the state anthem, “Jay Bharatha Jananiya Tanujate.” Principal Shriharsha Joshi spoke about the importance of the Kannada language, emphasizing its rich heritage and cultural significance. He encouraged everyone to embrace and speak Kannada, and motivated non-Kannadigas to start learning and conversing in it. The event stood as a vibrant expression of Kannada pride and heritage.