ಶ್ರೀ ಸ್ವಾಮಿನಾರಾಯಣ ಗುರುಕುಲ ಅಂತರರಾಷ್ಟ್ರೀಯ ಶಾಲೆ, ಬೆಳಗೋಳ, ಮೈಸೂರು ಸಮೀಪದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕನ್ನಡದ ವೈಭವವನ್ನು ಸಾರುವ ನೃತ್ಯ, ಹಾಡು, ನಾಟಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟವು.
ಈ ಆಚರಣೆಯ ವಿಶೇಷ ಆಕರ್ಷಣೆಯಾಗಿದ್ದವರು ಡಾ. ಎಚ್.ಕೆ. ನರಸಿಂಹ ಮೂರ್ತಿ, ಪ್ರಖ್ಯಾತ ಕನ್ನಡ ಪ್ರಾಧ್ಯಾಪಕರಾಗಿದ್ದು, ಅವರು ಕನ್ನಡ ಭಾಷೆಯ ಮಹತ್ವವನ್ನು ವಿವರಿಸುತ್ತಾ, ವಿದ್ಯಾರ್ಥಿಗಳಿಗೆ ಕನ್ನಡ ಮಾತನಾಡಲು ಪ್ರೋತ್ಸಾಹ ನೀಡಿದರು. ಅವರ ಪ್ರೇರಣಾದಾಯಕ ಭಾಷಣ ಶ್ರೋತೃಗಳನ್ನು ಕನ್ನಡದ ಪ್ರೀತಿ ಮತ್ತು ಅಭಿಮಾನದಲ್ಲಿ ತೇಲಿಸಿತು.
ಕಾರ್ಯಕ್ರಮದಲ್ಲಿ ಶಾಲೆಯ ಸಂಯೋಜಕರಾದ ಸತೀಶ್ ಅವರು ಕನ್ನಡ ಭಾಷೆಯ ಸೌಂದರ್ಯ ಹಾಗೂ ಅದರಲ್ಲಿ ಅಡಗಿರುವ ಸಾಹಿತ್ಯದ ಆದ್ಭುತತೆಯನ್ನು ಹಂಚಿಕೊಂಡರು. ಕನ್ನಡದ ಗರ್ಭದಲ್ಲಿ ಇರುವ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಹುರಿದುಂಬಿಸುವ ಉಲ್ಲೇಖಗಳು ಕಾರ್ಯಕ್ರಮದ ಶ್ರೀಮಂತಿಕೆಯನ್ನು ಹೆಚ್ಚಿಸಿತು.
ಕನ್ನಡ ವಿಭಾಗದ ಅಧ್ಯಾಪಕರಾದ ಶ್ರೀ ಮಹೇಶ್, ಶ್ರೀ ದಿಲೀಪ್, ಶ್ರೀ ಅಣ್ಣಯ್ಯ ಸ್ವಾಮಿ, ಶ್ರೀಮತಿ ಶಾರದಾ, ಶ್ರೀಮತಿ ಶಶಿಕುಮಾರ್ ಮತ್ತು ಶ್ರೀ ಮತಿ ತಾರಾ ಅವರ ಕೈಂಕರ್ಯ ಹಾಗೂ ಎಲ್ಲಾ ಶಿಕ್ಷಕ ವೃಂದದ ಸಹಕಾರ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಪ್ರೇರಣೆ ನೀಡಿತು. ವಿದ್ಯಾರ್ಥಿಗಳ ಆಸಕ್ತಿ, ಶಿಕ್ಷಕರ ಶ್ರಮ ಹಾಗೂ ಕನ್ನಡ ಭಾಷೆಯ ವಿಶಿಷ್ಟತೆಯನ್ನು ಉಜ್ಜೀವನಗೊಳಿಸುವ ಈ ಕಾರ್ಯಕ್ರಮ ಶಾಲೆಯವರಿಗೆ ಸ್ಮರಣೀಯವಾಗಿದೆ.
ಪ್ರಾಂಶುಪಾಲರಾದ ಶ್ರೀ ಹರ್ಷ ಜೋಷಿಯವರು ಮಾತನಾಡಿ ಕನ್ನಡ ನಾಡಿನ ರಾಜ ವೈಭವವನ್ನು ವಿವರಿಸಿದರು. ಕನ್ನಡ ಭಾಷೆಯ ಬಗ್ಗೆ ಪ್ರೀತಿ ಬೆಳೆಸಿ, ಉಳಿಸಿಸಲು ಪ್ರೋತ್ಸಾಹಿಸಿದರು.
Kannada Rajyotsava was celebrated with grandeur and enthusiasm at Shree Swaminarayan Gurukul International School, Belagola, near Mysuru. The event saw active participation from students, who showcased their talents through vibrant cultural programs, including dances, songs, skits, and other activities that celebrated the rich heritage of Karnataka and the Kannada language.
The celebration’s highlight was Dr. H. K. Narasimha Murthy, a distinguished Kannada professor. In his inspiring speech, he emphasized the importance of speaking Kannada and preserving its legacy. His words resonated deeply with the audience, instilling a sense of pride and love for the language.
Academic Coordinator Mr. Satish also addressed the gathering, speaking about the beauty and literary richness of the Kannada language. He highlighted its historical significance, cultural depth, and its unparalleled contribution to Indian literature. His speech added to the grandeur of the event.
The Kannada Department, led by Mr. Mahesh, Mr. Dilip, Mr. Hannah Swamy, Ms. Sharada, Ms. ShashiKumari, and Ms. Thara, along with the entire teaching staff, played a crucial role in organizing the event and ensuring its success.
Principal Shriharsha Joshi spoke about Karnataka’s regal heritage and encouraged everyone to foster love and pride for the Kannada language.
The celebration was a memorable occasion that showcased Karnataka’s cultural vibrancy and inspired students to embrace and promote Kannada in their daily lives.